ಮುಯ್ಯಕ್ಕೆ ಮುಯ್ಯಿ ತೀರಿತು
(ರಾಗ ಪೂರ್ವಿ ಅಟತಾಳ )
ಮುಯ್ಯಕ್ಕೆ ಮುಯ್ಯಿ ತೀರಿತು , ಜಗ-
ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ ||
ಸಣ್ಣವನೆಂದು ನಾ ನೀರು ತಾರೆಂದರೆ
ಬೆಣ್ಣೆಕಳ್ಳ ಕೃಷ್ಣ ಮರವೆ ಮಾಡಿ
ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ
ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ ||
ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ -
ವನ್ನು ನೀನಿತ್ತೆ ನಿಜರೂಪದಿ
ಎನ್ನ ಪೀಡಿಸಿ ಪರಮ ಬಂಡನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯಿ ತೀರಿಸಿಕೊಂಡ್ಯಯ್ಯ ||
ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಭಕ್ತರಾಧೀನನಾಗಿರಬೇಡವೆ?
ಯುಕ್ತಿಯಲಿ ನಿನ್ನಂಥ ದೇವರ ನಾ ಕಾಣೆ
ಮುಕ್ತೀಶ ಪುರಂದರವಿಠಲ ಪಂಢರಿರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments