ಮಾಡು ಸಿಕ್ಕದಲ್ಲಾ

ಮಾಡು ಸಿಕ್ಕದಲ್ಲಾ

(ರಾಗ ಪಂತುವರಾಳಿ ಏಕತಾಳ ) ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ | ಜೋಡಿ ಹೆಂಡ್ರಂಜಿ ಓಡಿಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ || ಎಚ್ಚರಗೊಳಲಿಲ್ಲಾ , ಮನವೇ ಹುಚ್ಚನಾದೆನಲ್ಲಾ | ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದುಹೋಯಿತಲ್ಲಾ || ಮುಪ್ಪು ಬಂದಿತಲ್ಲಾ , ಪಾಯಸ ತಪ್ಪದೆ ಉಣಲಿಲ್ಲಾ | ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪಗೆ ಬಿತ್ತಲ್ಲಾ || ಯೋಗವು ಬಂತಲ್ಲಾ , ಬದುಕು ವಿ- ಭಾಗವಾಯಿತಲ್ಲಾ | ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು