ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ

ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ

(ಆಹರಿರಾಗ ಅಟ್ಟತಾಳ) ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ ತನು ಹೊರೆಯನೊಲ್ಲೆನವ್ವಾ ||ಪ|| ಹಾರ ಕೊರಳಿಗೆ ಭಾರ ಹುವ್ವಿನ ಭಾರ ಸೈರಿಸಲಾರೆ ನೆ ಮಾರನಯ್ಯನು ಬಾರದಿದ್ದರೆ ಮಾರನಂಬಿಗೆ ಗುರಿಯ ಮಾಡಿ ||೧|| ಎಲ್ಲದೇವರ ವಲ್ಲಭನೆಂದು ಒಲಿದೆ ಮನ ನಿಲ್ಲದೆ ನಿಲ್ಲದೆ ರಂಗ ಪೋದ ಮಧುರೆಗೆ ಬಿಲ್ಲಹಬ್ಬದ ನೆವನ ಮಾಡಿ ||೨|| ಮಂದಾನಿಲವ ಸಹಿಸಲಾಗದು ನೊಂದೆ ಶುಕಪಿಕರವಗಳಿದ ಚಂದ್ರಕಿರಣಗಳಿದಿ ಬೆಂದೆ ಇನ್ನೀ ವೃಂದಾವನವೇಕವನನಗಲಿ ||೩|| ಮುನ್ನ ಆಡಿದ ಮಾತನು ಮರೆತು ಎನ್ನ ವನದೊಳಗೀಡಾಡಿ ವನ್ನಜಾಕ್ಷನು ಬಾರ ಪುರದ ವನ್ನಿತೆಯರನು ಮೆಚ್ಚಿ ಪೋದ ||೪|| ವೊಂಗೊಳಲ ಧ್ವನಿಗೆ ಸಿಲುಕಿ ಭಂಗಬಟ್ಟೆನಂಗಜನಿಂದಲಿ ಪೆಂಗಳಿಗುಚಿತವಲ್ಲ ರಂಗವಿಠಲನ ತೋರದಿದ್ದಡೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು