ನೋಡು ಮನವೆ ನಿನ್ನೊಳಾಡುವ ಹಂಸನ
(ಬಸಂತ್ ರಾಗ ಝಪ್ ತಾಳ)
ನೋಡು ಮನವೆ ನಿನ್ನೊಳಾಡುವ ಹಂಸನ
ಇಡಾಪಿಂಗಳ ಮಧ್ಯನಾಡಿವಿಡಿದು ||ಪ||
ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ
ಹಾದಿವಿಡಿದು ನೋಡು ಮಣಿಪುರದ
ಒದಗಿ ಕುಡುವ ಅನಹತ ಹೃದಯಸ್ಥಾನವ
ಸಾಧಿಸಿ ನೋಡುವದು ವಿಶುದ್ಧವ ||೧||
ಭೇದಿಸಿ ನೋಡುವದಾಜ್ಞಾ ಚಕ್ರ ದ್ವಿದಳ
ಸಾಧಿಸುವದು ಸುಖ ಸಾಧುಜನ
ಆಧಾರದಲಿಹ ತಾ ಅಧಿಷ್ಠಾನವ ನೋಡು
ಅಧಿಪತಿ ಆಗಿಹಾಧೀನ ದೈವವ ||೨||
ಮ್ಯಾಲಿಹ ಬ್ರಹ್ಮಾಂಡ ಸಹಸ್ರದಳ ಕಮಲ
ಹೊಳೆಯುತಿಹ ಭಾಸ್ಕರ ಪ್ರಭೆಯು ಕೂಡಿ
ಮೂಲಸ್ಥಾನದ ನಿಜನೆಲೆನಿಭವ ನೋಡು
ಬಲಕನೊಡೇಯ ಮಹಿಪತಿಸ್ವಾಮಿಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments