ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು
(ಕಾಂಬೋಧ (ಭೂಪ್) ರಾಗ ತ್ರಿತಾಳ)
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು
ನಿಜಗುಹ್ಯದ ಮಾತು ಗುರುತವಾಗಿಹ ಸಾಧು ಬಲ್ಲ ಖೂನ ||ಧ್ರುವ||
ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು
ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು
ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು
ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು ||೧||
ಹರಿಯದ ಹರಿಯಿತು ಮುರಿಯದ ಮುರಿಯಿತು ಹುರಿಯಲೊಂದು
ಮರೆಯದ ಮರೆಯಿತು ಅರಿಯದ ಅರಿಯಿತು ಅರಿವಿಲೊಂದು
ಸುರೆಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು
ಜರಿಯದ ಜರಿಯಿತು ಬೆರಿಯದ ಬೆರೆಯಿತು ಕುರಿವಿಲೊಂದು ||೨||
ಜಾರದ ಜಾರಿತು ಮೀರದ ಮೀರಿತು ಹಾರಲೊಂದು
ತೋರದ ತೋರಿತು ಸೇರದ ಸೇರಿತು ಸಾರಲೊಂದು
ಬೀರದ ಬೀರಿತು ಸಾರಸದೋರಿತು ಕರದಲೊಂದು
ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments