ಕಂಡೆ ಕಂಗಳಲೆನ್ನ ಮಂಗಳಾತ್ಮನ

ಕಂಡೆ ಕಂಗಳಲೆನ್ನ ಮಂಗಳಾತ್ಮನ

(ಮಾಂಡ್ ರಾಗ ಕೇರವಾ ತಾಳ) ಕಂಡೆ ಕಂಗಳಲೆನ್ನ ಮಂಗಳಾತ್ಮನ ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ|| ಬಾಲಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ ಗೋಪಾಲನ ಕಂಡೆ ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ ಕುಲಕೋಟಿ ಬಂಧುವಾದ ಬಳಗನ ಕಂಡೆ ||೧|| ಕೊಳಲನೂದುವ ಮೂರ್ತಿ ನಳಿನನಾಭನ ಕಂಡೆ ಥಳಥಳಿಸುವ ಪದ ಹೊಳೆವನ ಕಂಡೆ ಕಳಲ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ ಇಳೆಯೊಳು ಗೋಕುಲದಿ ಸುಳಿದನ ಕಂಡೆ ||೨| ಕಿರೀಟಕುಂಡಲಕರ್ಣ ಕೌಸ್ತುಭಧರನ ಕಂಡೆ ಪರಿಪರಿಭೂಷಣ ಸರ್ವಾಂಗನ ಕಂಡೆ ಗರುಡವಾಹನ ಸ್ವಾಮಿ ಉರಗಶಯನನ ಕಂಡೆ ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ ||೩|| ವಿದುರವಂದಿತ ದೇವ ಮದನಮೋಹನ ಕಂಡೆ ಸಾಧುಹೃದಯ ಪ್ರಾಣ ಶ್ರೀಮಾಧವನ ಕಂಡೆ ಯದುಕುಲೋತ್ತಮ ಮಧುಸೂದನನ ಕಂಡೆ ಆದಿ ಅವಿನಾಶ ಶ್ರೀಧರನ ಕಂಡೆ ||೪|| ತುರುಗಳ ಕಾಯ್ದ ಶ್ರೀಹರಿ ಗಿರಿಧರನ ಕಂಡೆ ಮುರಹರನೆನಿಸಿದ ಸುರಾಧೀಶನ ಕಂಡೆ ಕರಿಯ ವರದಾಯಕ ಹರಿ ದಯಾಳುವ ಕಂಡೆ ನರಹರಿಯು ಶ್ರೀನಾರಾಯಣನ ಕಂಡೆ ||೫|| ದುಷ್ಟಮರ್ದನ ದೂರ ವಿಷ್ಣುದೇವನ ಕಂಡೆ ಶಿಷ್ಟಜನಪಾಲಕ ಶ್ರೀಸೃಷ್ಟೀಶನ ಕಂಡೆ ದೃಷ್ಟಿಯೊಳು ಸುಳಿದು ದೃಷ್ಟಾಂತದವನ ಕಂಡೆ ಕಷ್ಟ ಪರಿಹರಿಪ ಶ್ರೀ ಕೃಷ್ಣನ ಕಂಡೆ ||೬|| ಗುರು ಶಿರೋಮಣಿ ತ್ರೈಲೋಕ್ಯನಾಥನ ಕಂಡೆ ಪರಮಭಕ್ತರ ಸಂಜೀವನ ಕಂಡೆ ಶರಣರಕ್ಷಕ ನಮ್ಮ ಕರುಣಸಿಂಧುನ ಕಂಡೆ ತರಳ ಮಹಿಪತಿ ಪ್ರಾಣಹೊರೆವನ ಕಂಡೆ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು