ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ

ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ

( ವಸಂತ ರಾಗ ಝಪ್ ತಾಳ) ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ ಚೇತಿಸಿ ಬ್ಯಾರಿಹ ವಸ್ತು ಗಾಣಿ ||ಧ್ರುವ|| ದ್ವೈತ ಎನಲಿಕ್ಕೆ ತಾಂ ಅದದೆ ಅದ್ವೈತ ಅದ್ವೈತ ಎನಲಿಕ್ಕೆ ಅದೆನೆ ತಾ ದ್ವೈತ ||೧|| ಹಿಂದುಮುಂದಾಗಿ ಆಡಿಸುತಿಹ ನಿಜ ಖೂನ ಎಂದಿಗಾದರು ತಿಳಿಯಗುಡದು ಪೂರ್ಣ ||೨|| ಅತಿ ಸೂಕ್ಷ್ಮ ತಿಳುವದಾರಲ್ಲೆ ಬಿದ್ದದ ಮಲಕು ನೇತಿ ನೇತೆಂದು ಶ್ರುತಿ ಇದಕೆ ತಿಳಕೊ ||೩|| ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ ಅದ್ವೈತನೆಂದವನೆ ಸ್ಮಾರ್ತನಲ್ಲ ||೪|| ಸ್ಮಾರ್ತ ವೈಷ್ಣವರ ಈ ಮತ ಗುರುಮಧ್ವ ಮುನಿ ಬಲ್ಲ ಅರ್ತು ಸ್ಥಾಪಿಸುವದು ಮನುಜಗಲ್ಲ ||೫|| ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ ದೋರುವರೆ ತರ್ಕಸ್ಯಾಡುವ ಸೊಲ್ಲ ||೬|| ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು ಚಿತ್ತ ಶುದ್ಧಾಗಿ ಮಹಿಪತಿಗೆ ಮುಟ್ಟು ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು