ಹರಿಹರಿ ಎನ್ನಿ ಹರಿವುದು ಪಾಪ

ಹರಿಹರಿ ಎನ್ನಿ ಹರಿವುದು ಪಾಪ

(ಮಾಂಡ್ ರಾಗ ಕೇರವಾ ತಾಳ) ಹರಿಹರಿ ಎನ್ನಿ ಹರಿವುದು ಪಾಪ ಧರೆಯೊಳು ಧರೆಯೊಳು ಕರಮುಗಿದು ಗುರುವಿಗೆ ಕೇಳುವುದು ಬಲು ಮೇಲು ||ಧ್ರುವ|| ಮೂಢಗೆ ಉಪಾಯ ಹೇಳಿದರೆ ತಿಳಿವದೆ ತಿಳಿವದೆ ಖೋಡಿಗೆ ಸುಲಕ್ಷಣದ ಮಾತು ಹೊಳೆವದೆ ||೧|| ಮೋಡದ ಮುಸುಕಿನಲಿ ಸೂರ್ಯನ ಬಿಸಿಲು ಬೀಳುದೆ ಬೀಳುದೆ ಗೂಢ ಗುರುವಿನ ಮಾತಿದು ನಾಡಿಗೆ ತಿಳಿವುದೆ ||೨|| ವಿಷ ಕಚ್ಚಿದ ಮನಕೆ ಸುಘನ ಭಾಸುದೆ ಭಾಸುದೆ ತುಸು ಝರಿ ಇಲ್ಲದ ಬಾವಿಲಿ ನೀರು ಸೂಸುದೆ ಸೂಸುದೆ ||೩|| ಹಸೆಗೆಟ್ಟಿಹ ಕುಕ್ಕಡಿನೂಲ್ಹಾಸಿಗೆ ಬಾಹುದೆ ಬಾಹುದೆ ಕಸಕಡ್ಡಿಲ್ಲದ ಮುಗಿಲೆಂದಿಗೆ ತಾ ಮಾಸುದೆ ||೪|| ಮೀಸಲ ಮನ ಒಂದಾದರೆ ಸಾಕು ತಿಳಕೊಳ್ಳಿ ತಿಳಕೊಳ್ಳಿ ಭಾಸ್ಕರ ಗುರುರಾಯನ ಶ್ರೀಪಾದಕೆ ಬಲಗೊಳ್ಳಿ ಬಲಗೊಳ್ಳಿ ||೫|| ಲೇಸಿನ ನಿಜಸುಖ ನೆರೆಗೊಳ್ಳೆ ಮಹಿಪತಿ ನಿನ್ನಲ್ಲಿ ನಿನ್ನಲ್ಲಿ ಹೇಸಿ ಮುಖದೋರದೆ ಹೋಗುವುದು ಭವದ ತಳ್ಳಿ ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು