ಉತ್ತಮೋತ್ತಮ ದೇವ ನೀನಿರಲಿಕ್ಕೆ

ಉತ್ತಮೋತ್ತಮ ದೇವ ನೀನಿರಲಿಕ್ಕೆ

(ಬಾಗೇಶ್ರೀ ರಾಗ ಝಂಪೆತಾಳ) ಉತ್ತಮೋತ್ತಮ ದೇವ ನೀನಿರಲಿಕ್ಕೆ ಮತ್ತೆ ಅನ್ಯದೇವನಾರಿಸಲೇತಕೆ ||ಧ್ರುವ|| ಸತ್ಯಸನಾತನನೆಂದು ಶ್ರುತಿ ಸಾರುತಿರಲಿಕ್ಕೆ ಚಿತ್ತ ಚಂಚಲವಾಗುವ ಸಂದೇಹವ್ಯಾತಕೆ ಎತ್ತ ನೋಡಿದರತ್ತ ಪ್ರತ್ಯಕ್ಷ ನೀದೋರಲಿಕ್ಕೆ ಮತ್ತೆ ಆಹ್ವಾನ ವಿಸರ್ಜನವೇತಕೆ ||೧|| ವಾಸವಾಗಿ ಎನ್ನಾತ್ಮದೊಳು ನೀನೆ ಇರಲಿಕ್ಕೆ ದೇಶದೇಶವನೆ ಶೋಧಿಸುವದೇತಕೆ ವಾಸುದೇವನೆ ನೀನೆ ಎನ್ನ ಈಶನಾಗಿರಲಿಕ್ಕೆ ಸೋಸಿಲನೇಕ ವೇಷದೋರುವದೇತಕೆ ||೨|| ಭಾನುಕೋಟಿತೇಜ ಎನ್ನೊಡೆಯನಾಗಿರಲಿಕ್ಕೆ ಬಿನುಗುದೈವದ್ಹಂಗು ತಾ ಇನ್ನೊಂದೇತಕೆ ಮನದ ಮಂಗಳಾಗಿ ನೀ ಮಹಿಪತಿಗೆ ಭಾಸುತಿರಲಿಕ್ಕೆ ಅನುಭವಕೆ ಅನುಮಾನಬಡುವದೇತಕೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು