ನೆರೆನಂಬು ಮನವೆ ಹರಿಯ

ನೆರೆನಂಬು ಮನವೆ ಹರಿಯ

( ಪೂರಿಯಾ ರಾಗ , ರೂಪಕತಾಳ) ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ||ಪ|| ಸ್ಮರಿಸಿದಾಕ್ಷಣ ಕರಿಯ ಸೆರೆಯ ಬಿಡಿಸಿದನರಿಯ ಮರೆಯದೆ ಜಗದೊಳು ಹರಿಯ ಚರಣಕಮಲಯುಗ ಮರಿಯ ||೧|| ಧರಿಯೊಳು ದ್ರೌಪದಿ ಮೊರೆಯ ಹರಿ ಕೇಳಿದ ನೀನರಿಯ ಅರಿತು ನಡೆವನೀ ಪರಿಯ ಸಾರುತಿದೆ ಕೃತಿ ಖರೆಯ ||೨|| ಅರಿವಿನೊಳು ಮನ ಹರಿಯ ದೋರುವ ಘನ ಆಶ್ಚರಿಯ ತರಳ ಮಹಿಪತಿ ದೊರಿಯ ನೆರೆನಂಬಿರು ಈ ಪರಿಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು