ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ

ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ

(ರಾಗ ಭೈರವಿ ಕೇರವಾ ತಾಳ) ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ ||ಪ|| ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವುದು ದಯ ತರಣೋಪಾಯದ ||೧|| ಒಲಿಸಿಕೊಳ್ಳಲು ನಿಮ್ಮ ಫಲ್ಗುಣನಂಥವನಲ್ಲ ಗೆಲಿಸುವದೋ ನೀ ಸುಪಥ ನೆಲೆ ನಿಭದೋರಿ ||೨|| ಮೊರೆ ಇಡಲು ನಾ ನಿಮ್ಮ ಕರಿರಾಜನಂಥವನಲ್ಲ ಕರುಣಿಸುವುದೊ ಎನಗೆ ಅರವಿಡಿದು ಪೂರ್ಣ ||೩|| ಶರಣು ಹೋಗಲು ನಿಮ್ಮ ಧೀರ ವಿಭೀಷಣನಲ್ಲ ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ ||೪|| ಭಕ್ತಿಮಾಡಲು ನಿಮ್ಮ ಶಕ್ತ ಸಮರ್ಥನಲ್ಲ ಯುಕ್ತಿದೋರುವದೊ ನಿಮ್ಮ ಮುಕ್ತಿ ಮಾರ್ಗದ ||೫|| ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ ಗತಿಸುಖದೋರೆನಗೆ ಪತಿತಪಾವನ ||೬|| ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ ವಾಸನೆ ಪೂರಿಸೊ ಪೂರ್ಣ ದೇಸಿಗರ ದೇವ ||೭|| -- ಮಹಿಪತಿದಾಸರ ರಚನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು