ನೊಂದೆನಯ್ಯ ಭವದೊಳು

ನೊಂದೆನಯ್ಯ ಭವದೊಳು

(ರಾಗ - ಪೂರ್ವಿ ಆದಿತಾಳ) ನೊಂದೆನಯ್ಯ ಭವದೊಳು ಸಿಂಧುಶಯನ ವೇಂಕಟೇಶ ||ಪ|| ಒಂದು ದಿನ ಸುಖವಿಲ್ಲ ಗೋ- ವಿಂದ ಬಹಳ ಕರುಣದಿಂದ ನಿ- ರ್ಬಂಧವನ್ನು ಕಳೆದು ಎನ್ನ ತಂದೆ ನೀನೇ ರಕ್ಷಿಸಯ್ಯ ||೧|| ಕಪಟ ನಾಟಕಸೂತ್ರಧಾರಿ ಅಪರಿಮಿತ ಮಹಿಮ ಎನ್ನ ಅಪರಾಧವನು ಕ್ಷಮಿಸಿ ಮುಂದೆ ಕಪಟವಿಲ್ಲದೆ ರಕ್ಷಿಸಯ್ಯ ||೨|| ಕಂದಪ್ರಹ್ಲಾದನಂತೆ ತಂದೆ ಮುನಿದಾಡುವ ತೆರದಿ ಗ- ಜೇಂದ್ರನಂತೆ ದೃಢವಿಲ್ಲ ಮಂದಮತಿಯ ರಕ್ಷಿಸಯ್ಯ ||೩|| ನರಜನ್ಮದೊಳಗೆ ಪುಟ್ಟಿ ನರಕಭಾಜನ ತಾನಾಗಿ ದುರಿತ ಪಂಜರದೊಳಗೆ ನಾನು ಸೆರೆಯ ಬಿದ್ದೆ ರಕ್ಷಿಸಯ್ಯ ||೪|| ಹಗಲು ದೃಷ್ಟಿ ಕಾಣದವಗೆ ಮೊಗವುಗೊಂಡು ರಾತ್ರಿಯೊಳು ಹಗೆಯ ವನದಿ ಸಿಕ್ಕಿದವನ ಅಗಲಿ ಹೋಗದೆ ರಕ್ಷಿಸಯ್ಯ ||೫|| ಸಾವಿರ ಅಪರಾಧವನು ಜೀವಿತಾತ್ಮನೆ ಕ್ಷಮಿಸಿ ಎನ್ನ ಮೂವಿಧಿಯೊಳು ಸಿಲುಕದಂತೆ ಭಾವಿಸಿಯೇ ರಕ್ಷಿಸಯ್ಯ ||೬|| ವರಾಹ ತಿಮ್ಮಪ್ಪ ಮನದ ಘೋರ ದುಃಖವನ್ನು ಕಳೆದು ಮೀರಿ ಬಂದಾಪತ್ತಿನೊಳು ಕಾರಣಿಕನೆ ರಕ್ಷಿಸಯ್ಯ ||೭|| ---ರಚನೆ- ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು