ರಥವನೇರಿದ ರಥಿಕನ್ಯಾರೆ

ರಥವನೇರಿದ ರಥಿಕನ್ಯಾರೆ

--------ರಾಗ ಮಧ್ಯಮಾವತಿ (ರೇಗುಪ್ತಿ)(ಸಾರಂಗ) ಆದಿತಾಳ(ಧುಮಾಳಿ) ರಥವನೇರಿದ ರಥಿಕನ್ಯಾರೆ ಪೇಳಮ್ಮಯ್ಯ ||ಪ|| ಕಥಿತದ್ಯಾತ ಸಂಸ್ತುತ ವಿತತಾನತ ಹಿತಕರದಿ ವಿಷಸೃತಿ ಕಾಣಮ್ಮ||ಅ.ಪ|| ಹಾಟಕರತ್ನ ಸುಪೀಠ ಮಧ್ಯಮಂಟಪದಿ ನೋಡಮ್ಮಯ್ಯ ತಾಟಂಕಯುತ ವಧೂಟಿಯರಿಕ್ಕೆಲದಿ ನೋಡಮ್ಮಯ್ಯ ಕೋಟಿಭಾಸ್ಕರ ಪ್ರಭಾಲೋಪದಿ ರಾಜಿಸುವ ನೋಡಮ್ಮಯ್ಯ ಆಟದಿ ಕುರುಜ ಮಹಾಟವಿ ಸವರಿ ಕಿ- ರೀಟಿಯ ಸಲಹಿದ ಖೇಟವಾಹನನೆ ||೧|| ಭುಜಗರಾಜ ಫಣಮಂಡಲ ಮಂಡಿತನೆ ನೋಡಮ್ಮಯ್ಯ ವಿಜಯದರಾರಿಗದಾಂಬುಜ ಕರಭೂಷಿತನೆ ನೋಡಮ್ಮಯ್ಯ ಗಜಚರ್ಮಧರಾದ್ಯ ನಿಮಿಷಗಣ ಸೇವಿತನೆ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸ್ಠೆಪೇಳ್ದ ನಿರಜ ಕಾಣಮ್ಮ ||೨|| ಏತಾದೃಶ ಮಹಾಮಹಿಮ ರಮಾವಲ್ಲಭನು ನೋಡಮ್ಮಯ್ಯ ಶ್ವೇತದ್ವೀಪಾನಂತಾಸನ ವೈಕುಂಠ ಬಿಟ್ಟಿಳಿದು ನೋಡಮ್ಮಯ್ಯ ವೀತಭಯ ಜಗನ್ನಾಥವಿಠ್ಠಲ ಬಾರನ್ಯಾಕೆ ಪೇಳಮ್ಮಯ್ಯ ಭೂತಳ ಜನರಭಿಲಾಷೆಯ ಸಲಿಸಲು ವಾತಾಶನ ಗಿರಿಗಿಳಿದ ಕಾಣಮ್ಮ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು