ಬಲು ರಮ್ಯವಾಗಿದೆ ಹರಿಯ ಮಂಚ

ಬಲು ರಮ್ಯವಾಗಿದೆ ಹರಿಯ ಮಂಚ

---ರಾಗ ಕಾಂಬೋಧಿ (ಮಾಲಕಂಸ) ಝಂಪೆತಾಳ ಬಲು ರಮ್ಯವಾಗಿದೆ ಹರಿಯ ಮಂಚ||ಪ|| ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ|| ಪವನತನಯ ಮಂಚ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧|| ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಿಗೆ ಎರಡುಳ್ಳ ನೈಜಮಂಚ ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ ತಾಲ ಮುಸಲ ಹಲವ ಹಿಡಿದಿರುವ ಮಂಚ ||೨|| ರಾಮನನುಜನಾಗಿ ರಣವ ಜಯಿಸಿದ ಮಂಚ ತಾಮಸರುದ್ರನನು ಪಡೆದ ಮಂಚ ಭೀಮಾವರಜನೊಳು ಆವೇಶಿಸಿದ ಮಂಚ ಜೀಮೂತ ಮಂಡಲವ ತಡೆಗಟ್ಟಿದ ಮಂಚ ||೩|| ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ ದೇವಕೀಜಠರದಲಿ ಜನಿಸಿದ ಮಂಚ ||೪|| ವಾರುಣೀದೇವಿಗೆ ವರನೆನಿಸಿದ ಮಂಚ ಸಾರುವ ಭಕುತರ ಪೊರೆವ ಮಂಚ ಕಾರುಣ್ಯನಿಧಿ ಜಗನ್ನಾಥವಿಠ್ಠಲನ ವಿ- ಹಾರಕ್ಕೆ ಯೋಗ್ಯವಾದ ಶೇಷ ಮಂಚ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು