ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ

ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ

---------ರಾಗ ಮುಖಾರಿ (ಭೀಮ್ ಪಲಾಸ್ ) ತಾಳ-ಝಂಪೆ ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ ಚರಣಾಬ್ಜದಲಿ ಭಕುತಿ, ವಿಷಯದಿ ವಿರಕುತಿ ||ಪ|| ಬಿಂಬನೇ, ಸರ್ವ ಪ್ರಯೋಜನವ ಮಾಡಿ ಪ್ರತಿ- ಬಿಂಬರಿಗೆ ಸತ್ಫಲಗಳೀವ ಕಾವ ಬಿಂಬನೇ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ- ನೆಂಬ ಸುಜ್ಞಾನಪೂರ್ವಕ ನಿನ್ನ ಭಜಿಪ ಸುಖ ||೧|| ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ- ತರ್ಯಾಮಿ ವ್ಯಾಪ್ಯವ್ಯಾಪಕ ಪ್ರೇರಕ ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ ||೨|| ತಾರತಮ್ಯದ ಜ್ಞಾನ , ದುರ್ವಿಷಯಗಳಲಿ ಸ- ದ್ವೈರಾಗ್ಯ , ಹರಿಪ್ರೇಮಿಗಳಲಿ ಪ್ರೇಮ ಸೂರಿಗಳ ಸಂಗ ಗುಣರೂಪ ಕ್ರಿಯೆಗಳನು ಸುವಿ- ಚಾರ ಗೈಯುತೆ ನಿತ್ಯದೊಳು ಮೋದಪಡುವಂತೆ ||೩|| ಮಿಂದೋದಕಗಳೆಲ್ಲ ಮಜ್ಜನವು, ದೇಹಾನು- ಬಂಧಿ ಜನರೆಲ್ಲ ತವ ಪರಿವಾರವು ನಿಂದ್ಯ ಕರ್ಮಗಳೆಲ್ಲ ಪಾದುಕಗಳೆಂಬ ಅನು- ಸಂಧಾನ ಮನಕೆ ನಿತ್ಯದಲಿ ಬರುವಂತೆ ||೪|| ಚೇತನಾಚೇತಗಳೆರಡು ಪ್ರತಿಮೆಗಳ ಸಂ- ಪ್ರೀತಿಯಲಿ ಸಂರಕ್ಷಿಸುವುದು ಪೂಜೆ ಈ ತನುವೆ ಸದನವೆಂದರಿತು ನಿತ್ಯದಿ ಜಗ- ನ್ನಾಥವಿಠ್ಠಲನೆಂಬ ವಿಷಯವೇ ಮುಖ್ಯವೆಂದು||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು