ನೀಲಲೋಹಿತ ಪಾಲಯಮಾಂ
ರಾಗ ಕಾಂಬೋಧಿ(ಬಿಲಾವಲ್ ) ಝಂಪೆತಾಳ (ಕಹರವಾ)
ನೀಲಲೋಹಿತ ಪಾಲಯಮಾಂ , ನೀಲಲೋಹಿತ ||ಪ||
ಫಾಲನಯನ ಶುಂಡಾಲಚರ್ಮ ಸುದು-
ಕೂಲ ಮೃಡ ಪಾಲಿಸು ಕರುಣದಿ ||ಅ.ಪ||
ನಂದಿವಾಹನ ನಮಿಪೆ ಖಳ , ವೃಂದ ಮೋಹನ
ಅಂಧಕರಿಪು ಶಿಖಿಸ್ಯಂದನ , ಸನಕ ಸ-ನಂದನಾದಿ
ಮುನಿವಂದಿತ ಪದಯುಗ ||೧||
ಸೋಮಶೇಖರ-ಗಿರಿಜಾ ಸು-ತಾಮ್ರಲೇಖರಾ-
ಸ್ತೋಮವಿನುತ ಭವಭೀಮ ಭಯಂಕರ, ಕಾಮಾಹಿತ
ಗುಣಧಾಮ ದಯಾನಿಧೇ ||೨||
ನಾಗಭೂಷಣ ವಿಮಲ ಸ-ದ್ರಾಗ ಪೋಷಣ
ಭೋಗಿಶಯನ ಜಗನ್ನಾಥವಿಟ್ಠಲನ , ಯೋಗದಿ
ಭಜಿಸುವ ಭಾಗತರೊಳಿಡು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments