ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು || ಪ ||
ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು
ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು
ಅವನಿಯೊಳ್ ಶ್ರೀರಾಮನೆಂಬೊ ಹಣ್ಣು || ೧ ||
ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು || ೨ ||
ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರ ವಿಟ್ಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು || ೩ ||
(ಶ್ರೀ ವತ್ಸ ಜೋಶಿಯವರು ಸಂಪದದಲ್ಲಿ ಸೇರಿಸಿದ್ದು .
ಅಲ್ಲೂ ನೋಡಿ http://sampada.net/forum/12309
ಇನ್ನೊಂದು ಇದೇ ತರಹ ಇದೆ
ಇಲ್ಲಿ ನೋಡಿ
http://www.haridasa.in/%E0%B2%A6%E0%B2%BE%E0%B2%B8%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF/%E0%B2%B9%E0%B2%A3%E0%B3%8D%E0%B2%A3%E0%B3%81-%E0%B2%AC%E0%B2%82%E0%B2%A6%E0%B2%BF%E0%B2%A6%E0%B3%86-%E0%B2%95%E0%B3%8A%E0%B2%B3%E0%B3%8D%E0%B2%B3%E0%B2%BF%E0%B2%B0%E0%B3%8B-%E0%B2%A8%E0%B3%80%E0%B2%B5%E0%B3%80%E0%B2%97/1414 );
)
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments