ಬಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ
ಬಾರಮ್ಮ.. ಶ್ರೀ ರಂಗಧಾಮನ ತಂದು ತೋರಮ್ಮ
ವಾರಿಜಾಸನ ಸನಕಾದಿ ವಂದಿತ
ಪಾದ ತೋರಿದ ಮಹಿಮ ಧೀರ ಉದ್ಧಾರನ.. ||
ಬೃಂದಾವನದೊಳಗಾಡುವ ಶ್ರೀ ಗಂಧವ ಮೈಯೊಳು ತೀಡುವ
ಚಂದದಿ ಕೊಳಲನ್ನೂದುವ ನಮ್ಮ ಕಂದ ಜಲಕ್ರೀಡೆಯನಾಡುವ
ನಂದನಂದನ ಗೋವಿಂದನ ಕಾಣದೆ
ಒಂದು ನಿಮಿಷ ಯುಗವಾಗಿ ತೋರುತಲಿದೆ... ||
ಉಡುವಸೀರೆ ಸೆಳೆದೋಡುವ ದೊಡ್ಡ ಕಡಹದ ಮರವ ತಾನೇರುವ
ಕೊಡಲೊಲ್ಲದೆ ಬಲು ಕಾಡುವ ಲಜ್ಜೆಗೆಡಿಸಿ ಮಾನಿನಿಯರ ಕೂಡುವ
ತಡವ್ಯಾತಕೆ ಸಖಿ ತವಕದಿಂದಲಿ ಪೋಗಿ
ಒಡೆಯನ ಕರೆತಾರೆ ಅಡಿಗೆರಗುವೆನಮ್ಮ...||
ನೀಲವರ್ಣ ನಿಜರೂಪನ ಶ್ರೀ ಲೋಲ ಹೆಳವನಕಟ್ಟೆ ವಾಸನ
ಲಾಲಿ ಹಾಡು ರಂಗೇಶನ ಮೂಲೋಕಕ್ಕೊಡೆಯ ಪಾಲಿಸೆನ್ನನ
ಆಲಸ್ಯವ್ಯಾತಕೆ ವಿನಯನ ಕರತಾರೆ
ಜಾಣೆ ನಿನಗೆ ಕಂಠ ಮಾಲೆ ಹಾಕುವೆನಮ್ಮ...||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments