ಈ ಜೀವ ಈ ದೇಹ

ಈ ಜೀವ ಈ ದೇಹ

ರಾಗ : ಕಲ್ಯಾಣವಸಂತ ಖಂಡಛಾಪುತಾಳ ಈ ಜೀವ ಈ ದೇಹ ಇದ್ದು ಫಲವೇನೋ ರಾಜೀವ ನೇತ್ರನಾ ನೋಡದ ಮೇಲೇ ರಂಗರಾಜನ ಪಾದ ಭೃಂಗನೆಂದೆನಿಸುವಾ ತುಂಗ ಪಾದವ ತೊಳೆದು ತೀರ್ಥವಾವಹಿಸಿ ಹಿಂಗದೆ ಪ್ರತಿದಿನ ಹಿರಣ್ಯಾರಿ ದೇವನ್ನ ಮಂಗಳಪ್ರದನಾದ ರಂಗನ ನೋಡದ ಮೇಲೇ ..|| ಹರಿಗುಣ ಅನವರತ ಭರದಿಂದ ಪೊಗಳುವಾ ಗುರು ಮಧ್ವರಾಯರ ಮತನ ಪೊಂದೀ ತರಿದು ದುರ್ಮತಿ ಸಂಗ ತಿರುಪತಿ ರಮಣನ ದರುಶನವನು ಮಾಡಿ ಸುಖವ ಪಡೆಯದ ಮೇಲೇ..|| ಕಾಮಿತ ಪ್ರದನಾದ ಭೂಮಿ ವರಾಹನ ಕಂಡು ಸ್ವಾಮಿ ಪುಷ್ಕರಣಿಯ ಸ್ನಾನವ ಮಾಡಿ ಶ್ಯಾಮ ಸುಂದರ ನಮ್ಮ ಪುರಂದರ ವಿಠಲನ ನೇಮದಿಂದಲಿ ಭಜಿಸಿ ಸುಖವ ಪಡೆಯದ ಮೇಲೇ..||
ದಾಸ ಸಾಹಿತ್ಯ ಪ್ರಕಾರ
ಬರೆದವರು