ನಮಿಸಿ ಬೇಡುವೆ ವರಗಳ ನಿನ್ನ
ನಮಿಸಿ ಬೇಡುವೆ ವರಗಳ ನಿನ್ನ
ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ || ಪ ||
ವಿಮಲ ಸುಮತಿ ಜನರತಿಪ್ರೀಯಾ - ಪಾದ
ಕಮಲಗಳಿಗೆರಗುವೆನೊ ಜೀಯಾ
ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ
ಅಮಿತ ಕರುಣದಿ ಪಿಡಿಯೋ ಕೈಯ್ಯ || ೧ ||
ಕ೦ಡಕ೦ಡವರನು ಬೇಡಿ ನೊ೦ದೆ ಕ
ಮ೦ಡಲು ದ೦ಡಧಾರಿ ನೀ ಗತಿಯೆ೦ದೆ
ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ
ದ೦ಡಪಾಣಿಯ ಪಾದ ತೋರಿಸು ತ೦ದೆ || ೨ ||
ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦
ಗಾಸುನದಿನಿಲಯಾ ಅಘಾ೦ಬುಧಿ ಪೋತ
ವಾಸುಕಿಶಯನ ಜಗನ್ನಾಥ ವಿಠ್ಠಲ
ದಾಸರ ಪೋಷಕ ಲಾಲಿಸಿ ಪೋತಾ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments