ಎದ್ದು ಬರುತಾರೆ ನೋಡೆ

ಎದ್ದು ಬರುತಾರೆ ನೋಡೆ

ಎದ್ದು ಬರುತಾರೆ ನೋಡೆ ಗುರುಗಳು ತಾವೆದ್ದು ಬರುತಾರೆ ನೋಡೆ || ಪ || ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ || ಕೊರಳೋಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ || ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ ಮುದಮನದಲಿ ನಿತ್ಯ ಸದಮಲ ರೂಪತಾಳಿ || ೨ || ದಾತ ಗುರುಜಗನ್ನಾಥವಿಠ್ಠಲನ್ನ ಪ್ರೀತಿಯ ಪಡಿಸುವ ದೂತರ ಪೊರೆಯುತ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು