ಮರ್ಕಟನ ಕೈನೂಲು By shreekant.mishrikoti on Sun, 04/05/2009 - 17:36 ಮರ್ಕಟನ ಕೈನೂಲು ಗುಕ್ಕರಿಯ ತೆರನಂತೆ ಸಿಕ್ಕಿಕೊಂಡು ಕಾಮಕ್ರೋಧಾದಿಗಳೆನ್ನ ಹಿಕ್ಕಿ ಹೀರುತಲಿವೆ ಏಕೆ ನೋಡುತಲಿದ್ಯೊ ಅಕ್ಕಟಕಟ ನಿನ್ನ ದಾಸನಲ್ಲವೆ ನಾನು ಸಿಕ್ಕು ಬಿಡಿಸಿ ನಿನ್ನ ಭಕುತಿಯ ತೋರಿಸೋ ಪಕ್ಕದೊಳಗಿಟ್ಟು ಸಲಹೊ ಶ್ರೀಪುರಂದರವಿಠಲ || ದಾಸ ಸಾಹಿತ್ಯ ಪ್ರಕಾರ ಉಗಾಭೋಗ ಬರೆದವರು ಪುರಂದರದಾಸ Log in to post comments