ಎಂದಿಗಾದರು ನಿನ್ನ ಪಾದಾರವಿಂದವೆ

ಎಂದಿಗಾದರು ನಿನ್ನ ಪಾದಾರವಿಂದವೆ

ಎಂದಿಗಾದರು ನಿನ್ನ ಪಾದಾರ- ವಿಂದವೆ ಗತಿಯೆಂದು ನಂಬಿದೆನೊ || ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು , ಮಂದರಧರ ಗೋವಿಂದ ಪುರಂದರವಿಠಲನೆ ನೀ ಬಂಧು ||೧|| ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆಪನ್ನರಕ್ಷಕನೆ ಪರಿಪಾಲಿಸು ಇನ್ನು ಪನ್ನಂಗಶಯನ ಶ್ರೀ ಪುರಂದರವಿಠಲನೆ ||೨|| ಬಾರಿಬಾರಿಗೆ ನಿನ್ನ ಚರಣಕ್ಕೆ ಶರಣೆಂದೆ ಭಾರತಿರಮಣನೆ ಬಾರೊ ಮನೆಗಿಂದು ತಂದೆ ಶ್ರೀಪುರಂದರವಿಠಲರಾಯನೆ ಎಂದೆಂದಿಗು ನೀನೆ ಜಗಕೆ ಬಂಧು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು