ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ

ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ ಹರಿಯೆ ಗತಿ ಸುರಪಸುರಾದಿಗಳಿಗೆ ಚರಣ 1: ರುಕ್ಮಿಣೀ ದೇವಿಯ ಶಿಶುಪಾಲಗೀವೆನೆಂದು ರುಕ್ಮ ಸಂಭ್ರಮಿಸಲು ಕೃಷ್ಣ ಬಂದು ಸಕಲ ರಾಯರುಗಳು ಸನ್ನದ್ಧರಾಗಿರೆ ರುಕುಮಿಣೀಯನು ತಂದು ವರಿಸಿ ಅಳಿದನಾಗಿ 2: ಹಯಾಸ್ಯನೆಂಬುವ ವೇದವ ಕದ್ದೊಯ್ಯೆ ಹಯಗ್ರೀವನಾಗಿ ಹರಿಯವನ ಕಾಯವ ಖಂಡಿಸಿ ಅಜಗೆ ವೇದವನಿತ್ತು ಕಾಯ್ದ ಕಮಲಾಕ್ಷನೆ ದೈವವೆಂದು 3: ಭಸುಮಾಸುರನಿಗೊಂದಸದಳ ವರವಿತ್ತು ತ್ರಿಶೂಲಧರ ಓಡಿ ಬಳಲುತಿರೆ ಬಿಸರುಹ ನಯನನು ಭಸುಮಾಸುರನನು ಭಸುಮವ ಮಾಡಿ ಶಿವನ ಪೊರೆದನಾಗಿ 4: ಸುರಪನ ರಾಜ್ಯವ ಬಲಿಯಾಕ್ರಮಿಸಲು ಹರಿ ದಾನವ ಬೇಡಿ ಯಜ್ಞದಲಿ ಚರಣದಿಂದಿಳೆಯ ಸ್ವರ್ಗವ ಈರಡಿ ಮಾಡಿ ಸುರಪಗೆ ರಾಜ್ಯವನಿತ್ತು ಪೊರೆದನಾಗಿ 5: ಸುರ ಭೂಸುರನ್ನು ಅಸುರರು ಬಾಧಿಸೆ ಹರಿಯವತರಿಸಿ ಅಸುರರನೆಲ್ಲ ಶಿರಗಳ ತರಿದು ಸುರ ಭೂಸುರರನು ಪೊರೆವುತ್ತಲಿಹನಾಗಿ ಪುರಂದರ ವಿಟ್ಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು