ಜಯ ಜಯ, ಜಯ ಜಾನಕೀಕಾಂತ

ಜಯ ಜಯ, ಜಯ ಜಾನಕೀಕಾಂತ

(ರಾಗ ನಾಟ ಆದಿತಾಳ) ಜಯ ಜಯ ||ಪ|| ಜಯ ಜಾನಕೀಕಾಂತ ಜಯ ಸಾಧುಜನವಿನುತ ಜಯತು ಮಹಿಮಾನಂತ ಜಯಭಾಗ್ಯವಂತ ||ಅ|| ದಶರಥನ ಮಗ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮ ಸಾಹಸಶಿಕ್ಷ ಅಂಬುಜದಳಾಕ್ಷ || ಸಾಮಗಾನವಿಲೋಲ ಸಾಧುಜನಪರಿಪಾಲ ಕಾಮಿತಾರ್ಥವಿದಾತ ಕೀರ್ತಿಸಂಜಾತ ಸೋಮಸೂರ್ಯಪ್ರಕಾಶ ಸಕಲಲೋಕಾಧೀಶ ಶ್ರೀ ಮಹಾರಘುವೀರ ಸಿಂಧುಗಂಭೀರ || ಸಕಲಶಾಸ್ತ್ರವಿಚಾರ ಶರಣುಜನಮಂದಾರ ವಿಕಸಿತಾಂಬುಜವದನ ವಿಶ್ವಮಯಸದನ ಸುಕೃತಮೋಕ್ಷಾಧೀಶ ಸಾಕೇತಪುರವಾಸ ಭಕ್ತವತ್ಸಲ ರಾಮಪುರಂದರಾವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು