ಕಾಲಿಗೆ ಬಿದ್ದೆನೊ ಕೈಯ ಬಿಡೊ

ಕಾಲಿಗೆ ಬಿದ್ದೆನೊ ಕೈಯ ಬಿಡೊ

(ರಾಗ ಶಾಮಕಲ್ಯಾಣಿ ಛಾಪುತಾಳ) ಕಾಲಿಗೆ ಬಿದ್ದೆನೊ ಕೈಯ ಬಿಡೊ ಬಾಳು ಬದುಕು ಮುತ್ತೈದಾಗಿ ||ಪ|| ಅಧರ ಚುಂಬಿಸದಿರೊ ರಂಗಯ್ಯ ಅಧರ ಸವಿಯೆಂದು ಸವಿದೆನೆ || ಎದೆಯ ಮುಟ್ಟದಿರೊ ಎಲೊ ರಂಗ ಅದು ಮರದ ಮೊಗ್ಗೆಂದು ಪಿಡಿದೆನೆ || ಅತ್ತೆ ಕಂಡರೆ ರಚ್ಚೆನಿಕ್ಕೋಳು , ಅವ- ಳಿತ್ತ ಬಂದರೆ ಮರುಳಾಗುವಳೆ || ಗಂಡ ಕಂಡರೆ ಎನ್ನ ಕೊಂದಾನು , ಎದೆ ಗುಂಡಿಗೆಷ್ಟು ಇಲ್ಲಿ ಬರಲಿಕ್ಕೆ || ನಾದಿನಿ ಎನ್ನಯ ಸೇರಳು , ಅತಿ ಮೋದವಾಗಿ ಇಬ್ಬರಾಳುವೆ || ಮನವೆ ಕೊಂಬವರೆಲ್ಲದೆರಗಳು , ಎನ್ನ ಪುರಂದರವಿಠಲನೆಂದರಿಯೇನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು