ಕಾರುಣ್ಯಮೂರುತಿಯೆ ( ಹರಿಹರ ಸ್ತೋತ್ರ)

ಕಾರುಣ್ಯಮೂರುತಿಯೆ ( ಹರಿಹರ ಸ್ತೋತ್ರ)

(ರಾಗ ಮುಖಾರಿ ಆದಿತಾಳ) ಕಾರುಣ್ಯಮೂರುತಿಯೆ ಕಂಗಳು ಮೂರುಳ್ಳ ದೊರೆಯೆ ||ಪ|| ಧಾರಿಣಿಯೊಳು ನಿನಗೆಣೆಯೆ ಗುರುದೇವ ಶಿಖಾಮಣಿಯೆ ||ಅ|| ಗುಹಾಸುರ ಮರ್ದನನೆ ದೇವ ಖಗ ವೃಷವಾಹನನೆ ಗಜಚರ್ಮ ಪೀತಾಂಬರನೆ ಮಹಾದೇವ ಮಾಧವನೆ || ತ್ರಿಪುರಾವಳಿ ಸಂಹಾರನೆ ತ್ರೈಲೋಕ್ಯ ಪಾವನನೆ ಅಪಾರಮಹಿಮನೆ ಪ್ರಸನ್ನ ಶ್ರೀಹರಿಹರನೆ || ತುಂಗಭದ್ರದಡಿಯ ತಾಳಿಪೆ ಗಂಗೆಯ ಜಡೆಯ ಪುರಂದರವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು