ಕಮಲ ಕೋಮಲ ಕರತಲಲಾಲಿತ
(ರಾಗ ಸೌರಾಷ್ಟ್ರ ತ್ರಿಪುಟತಾಳ )
ಕಮಲ ಕೋಮಲ ಕರತಲಲಾಲಿತ ಪಾದಪಲ್ಲವ ನೀ ದಾರೈ ಕೃಷ್ಣ
ಕಾಮಿನಿ ಭಾಮಿನಿರೂಪದ ಚಂದವ ನೋಡಬಂದೆನೇ ಭಾಮೇ ನಾನು ||೧||
ನಂದನಂದನ ಯದುಕುಲವಂದ್ಯನೆ ಇಂದುವದನ ನೀ ದಾರೈ ಕೃಷ್ಣ
ಮಂಜುಳಭಾಷಿಣಿ ಕುರವಕಗಂಧಿನಿ ಕಂಜನಾಭನೆ ಬಾಲೇ ನಾನು || ೨ ||
ಉದಧಿಶಯನ ನೀ ನವನೀತ ಕದ್ದವ ಜಾರ ಚೋರ ನೀ ದಾರೈ ಕೃಷ್ಣ
ಕಾಮಿನಿ ಸುಂದರಿ ನೀರಜಲೋಜನೆ ಚೋರನಲ್ಲವೇ ಬಾಲೇ ನಾನು ||೩||
ಮಂದರಧರನೆ ಪರಿಮಳ ಚೆನ್ನನೆ ಕಂಬುಕಂಧರ ನೀ ದಾರೈ ಕೃಷ್ಣ
ಚಂಚಲಲೋಚನೆ ಕುಟಿಲಕುಂತಲೆ ಕೋಮಲಾಂಗನೆ ಭಾಮೇ ನಾನು ||೪||
ಕಮಲಾರಮಣ ಕಲುಷನಿವಾರಣ ನಿಷ್ಕಾಭರಣ ನೀ ದಾರೈ ಕೃಷ್ಣ
ಕಾಮುಕಕಾಮಿನಿ ಚಂಪಕಗಂಧಿನಿ ಪುರಂದರವಿಠಲನೆ ಬಾಲೇ ನಾನು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments