ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ

(ರಾಗ ಸುರುಟಿ ಆದಿತಾಳ) ಮಂಗಳಂ ಜಯ ಮಂಗಳಂ ||ಪ|| ಗೋಪಗೋಪೀಸುತಗೆ ಗೋವಳರಾಯಕೆ ಗೋವರ್ಧನೋದ್ಧರ ಗೋವಿಂದಗೆ ಗೋಕುಲದಲಿ ಹುಟ್ಟಿ ಗೋವುಗಳನೆ ಕಾಯಿದ ಗೋಪಾಲಕೃಷ್ಣನ ಶ್ರೀಪಾದಕ್ಕೆ || ಭಕ್ತಜನ ಪಾಲಿಪಗೆ ಭವರೋಗವೈದ್ಯಗೆ ಅಚ್ಯುತಾನಂತ ಆದಿಪುರುಷಗೆ ಅಖಿಳಲೋಕೇಶಗೆ ಅಜನ ಪಡೆದಾತಗೆ ಕ್ಷೀರಸಾಗರವಾಸಿ ಲಕ್ಷ್ಮೀಶಗೆ || ಪನ್ನಂಗಶಯನಗೆ ಪಾವನಚರಿತ್ರಗೆ ಸನ್ನುತಾನಂತ ಸದ್ಗುಣರಾಶಿಗೆ ಎನ್ನೊಡೆಯ ಪುರಂದರವಿಠಲರಾಯಗೆ ತನ್ನ ನಂಬಿದವರ ಸಲಹುವ ದೇವಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು