ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ||ಪ|| ಸಾಗರದೊಳಾಡುವ ಮತ್ಸ್ಯನಿಗೆ ಬೇಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ವೇಗದಿಂದಲಿ ಭೂಮಿಯ ತಂದ ವರಹಗೆ ಕೂಗಿದ ಶಿಶುಪರಿಪಾಲನಿಗೆ || ವಾಸವಾನುಜ ಪರಶುವರಾಯುಧ ದಾಶರಥಿ ರಾಮಚಂದ್ರನಿಗೆ ಸಾಸಿರದ್ಹರಿನಾರುನೂರೆಂಟು ಹೆಂಗಳ ಮೋಸಮಾಡಿದ ನಮ್ಮ ಬುದ್ಧನಿಗೆ || ವಾಜಿಯನೇರಿದ ಮುಜ್ಜಗದೊಡೆಯಗೆ ಪೂಜಿತಚರಣಸರೋಜನಿಗೆ ರಾಜಿತ ಪುರಂದರವಿಟ್ಠಲರಾಯಗೆ ರಾಜಾಧಿರಾಜ ಸರ್ವೇಶಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು