ಮನ್ನಾರು ಕೃಷ್ಣಗೆ ಮಂಗಳ

ಮನ್ನಾರು ಕೃಷ್ಣಗೆ ಮಂಗಳ

( ರಾಗ ತೋಡಿ ಆದಿತಾಳ) ಮನ್ನಾರು ಕೃಷ್ಣಗೆ ಮಂಗಳ , ಜಗವ ಮನ್ನಿಸಿದೊಡೆಯಗೆ ಮಂಗಳ ||ಪ|| ಬೊಮ್ಮನ ಪಡೆದಗೆ , ಭಕ್ತರುದ್ಧಾರಿಗೆ ಕಮ್ಮಗೋಲನಯ್ಯಗೆ ಮಂಗಳ ಧರ್ಮರಕ್ಷಕನಿಗೆ ದಾನವಶಿಕ್ಷಗೆ ನಮ್ಮ ರಕ್ಷಿಸುವಗೆ ಮಂಗಳ || ತುರುಗಳ ಕಾಯ್ದಗೆ ಕರುಣಾಕರನಿಗೆ ಗಿರಿಯನೆತ್ತಿದವಗೆ ಮಂಗಳ ವರದ ತಿಮ್ಮಪ್ಪಗೆ ವಾರಿಜನಾಭಗೆ ಹರಿ ಸರ್ವೋತ್ತಮನಿಗೆ ಮಂಗಳ || ದೇವಕಿದೇವಿಯ ತನಯಗೆ ಮಂಗಳ ದೇವ ತಿಮ್ಮಪ್ಪಗೆ ಮಂಗಳ ಮಾವನ ಕೊಂದು ಮಲ್ಲರ ಮಡುಹಿದ ಪುರಂದರವಿಠಲಗೆ ಮಂಗಳ ||
ದಾಸ ಸಾಹಿತ್ಯ ಪ್ರಕಾರ
ಬರೆದವರು