ಯಾತಕ್ಕೆ ದುರಾಶೆ ಎಲೆ ಮನವೆ

ಯಾತಕ್ಕೆ ದುರಾಶೆ ಎಲೆ ಮನವೆ

(ರಾಗ ಪೂರ್ವಿ ರೂಪಕ ತಾಳ) ಯಾತಕ್ಕೆ ದುರಾಶೆ ಎಲೆ ಮನವೆ ||ಪ|| ಎಲೆ ಮನವೆ ನೀ ತಿಳಿ ಮನವೆ ||ಅ|| ಜನ್ಮಜನ್ಮಾಂತರದ ಪೂಜೆ ಫಲವು ಅನುಭವಿಸಲ್ಲದೆ ಬಿಡದೆಲೊ ಮನವೆ || ಪಣೆಯಲ್ಲಿ ಬರೆದ ಬ್ರಹ್ಮನ ಲಿಪಿಯ ಮೀರುವುದುಂಟೆ ಜಗದೊಳು ಮನವೆ || ಪುರಂದರವಿಠಲನ ಚರಣಕಮಲಗಳು ಅನುದಿನ ಭಜಿಸಿ ಬದುಕೆಲೊ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು