ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ ಸೇರಿ ಇರುವರೇ ಎಲೆ ಮನುಜ ||ಪ|| ಬಂದ ಮೊದಲು ಇತ್ತ ಬನ್ನಿ ಕುಳ್ಳಿರೆಂದು ಬಲು ಉಪಚರಿಸುವರು ಅಂದಿನ ಮರುದಿನ ಬಂದ ಸ್ನೇಹಿತರನ್ನ ಕಂಡಂತೆ ಕಾಣೂವರೊ ಬಂದ ಮೂರಲ್ಲಿ ಪರದೇಶಿಯ ಕಂಡಂತೆ ಸಡ್ಡೆ ಮಾಡದೆ ಇಹರೊ ಮುದದಿಂದ ನಾಲ್ಕು ದಿವಸವು ಇದ್ದರೆ ಮಾನಭಂಗವ ಮಾಡಿ ಮಾತಾಡುವರೊ || ಐದನೆ ದಿನ ಆಕಳು ಬರಲಿಲ್ಲ ಅರಸಿ ತರಬೇಕೆಂಬರೊ ಇಂದೆಮ್ಮಗೆ ಕಲಗಚ್ಚನಿಕ್ಕದೆ ಎಲ್ಲಿ ಹೋದರೆಂಬೋರೊ ಬೀದಿಯಲ್ಲಿ ಕಸ ಬೆಟ್ಟದಂತೆ ಬಿದ್ದಿದೆ ಭೇದವೆ ನಿಮಗೆಂಬೋರೊ ..............................??.....................................|| ಷಷ್ಠಿಯ ದಿನದಲ್ಲಿ ಅಟ್ಟಡಿಗೆಯೆಲ್ಲ ಆರಿಹೋಯಿತು ನಿಮಗೆ ಆಳುವೆ ಎಂತೆಂಬೋರೊ ಎಷ್ಟೆಂತ ನಿಮ್ಮ ಛಾನಸ ಏಳಬಾರದೆಂಬೋರೋ ಅಷ್ಟಮ ಶನಿಯಿದು ಮನೆ ಬಿಟ್ಟು ಹೋಗದು ನಮಗೆ ಅಳವಿಲ್ಲ ಎಂತಂಬೋರೊ ಇಷ್ಟು ಬಿಟ್ಟು ಶ್ರೀಪುರಂದರವಿಠಲನ ಇಹಪರವೆರಸಿಕೊಳ್ಳೊ ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು