ಜಯಮಂಗಳಂ ನಿತ್ಯ ಶುಭಮಂಗಳಂ

ಜಯಮಂಗಳಂ ನಿತ್ಯ ಶುಭಮಂಗಳಂ

(ರಾಗ ಮುಖಾರಿ ಅಟತಾಳ ) ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ವಾನರೇಂದ್ರನ ರೂಪವ ತಾಳಿದ ವನಧಿಯ ದಾಟಿ ಜಾನಕಿಗುಂಗುರವಿತ್ತ ದಾನವೇಂದ್ರನ ವನವನೆಲ್ಲವ ಕಿತ್ತು ಪಟ್ಟಣವನೆ ಸುಟ್ಟು ಇನಕುಲದ ರಾಮಗೆರಗಿದ್ಹನುಮಂತಗೆ || ದುಷ್ಟದುರ್ಯೋಧನನ ಮಡುಹಿ ಜ್ಯೇಷ್ಠಗೆ ಪಟ್ಟಗಟ್ಟಿ ಅವನಿಯೊಳು ಮೆರೆದವನಿಗೆ ದುಷ್ಟರಾಯರನೆಲ್ಲ ಮಡುಹಿದಖಿಳೇಶ್ವರನ ಕೃಷ್ಣಗತಿಪ್ರಿಯನಾದ ಭೀಮಸೇನಗೆ || ಯತಿರೂಪವ ತಾಳಿ ಶ್ರುತಿಶಾಸ್ತ್ರದಿಂ ಶ್ರೀ- ಪತಿಯು ಸರ್ವೋತ್ತಮನೆಂದೆನಿಸಿದವಗೆ ಯತಿವೇದವ್ಯಾಸನಾದ ಪುರಂದರವಿಠಲನ್ನ ಗತಿ ಮಾರ್ಗವ ತೋರಿದ ಮಧ್ವಮುನಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು