ಕೃಷ್ಣ ಬಾರೊ ಕೃಷ್ಣ ಬಾರೊ

ಕೃಷ್ಣ ಬಾರೊ ಕೃಷ್ಣ ಬಾರೊ

(ರಾಗ ಮೋಹನ ಛಾಪು ತಾಳ) ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ|| ಮನ್ಮಥಜನಕನೆ ಬೇಗನೆ ಬಾರೊ ಕಮಲಾಪತಿ ನೀ ಬಾರೊ ಅಮಿತಪರಾಕ್ರಮ ಶಂಕರ ಬಾರೊ ಕಮನೀಯಗಾತ್ರನೆ ಬಾರಯ್ಯ ದೊರೆಯೆ || ಸುರುಳು ಕೇಶಗಳ ಒಲಿವ ಅಂದ ಭರದ ಕಸ್ತೂರಿತಿಲಕದ ಚಂದ ಶಿರದಿ ಒಪ್ಪುವ ನವಿಲುಕಣ್ಗಳಿಂದ ತರತರಾಭರಣಗಳ ಧರಿಸಿ ನೀ ಬಾರೊ || ಹಾಲುಬೆಣ್ಣೆಗಳ ಕೈಯಲಿ ಕೊಡುವೆ ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ ಜಾಲ ಮಾಡದೆ ನೀ ಬಾರಯ್ಯ ಮರಿಯೆ ಬಾಲ ಎನ್ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು