ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ ಭ್ರಷ್ಟನ ಬಾಯೊಳಗೊಂದು ಕೆರ

ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ ಭ್ರಷ್ಟನ ಬಾಯೊಳಗೊಂದು ಕೆರ

(ರಾಗ ಧನಶ್ರೀ ಲಾವಣಿಧಾಟಿ) ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ ಭ್ರಷ್ಟನ ಬಾಯೊಳಗೊಂದು ಕೆರ ||ಪ|| ನಿಷ್ಠೆಯೊಳ್ ಹರಿದಾಸರ ಸೇವಿಸದ ಕ- ನಿಷ್ಠನ ಬಾಯೊಳಗೊಂದು ಕೆರ ||ಅ|| ನರಹರಿಮಹಿಮೆಯ ಸುಳ್ಳೆಂತೆಂಬುವ ನರನ ಬಾಯೊಳಗೊಂದು ಕೆರ ಪರಿಪರಿಯಿಂದಲಿ ಕುಹಕವನಾಡುವ ದುರುಳನ ಬಾಯೊಳಗೊಂದು ಕೆರ ಹರಿಸರ್ವೋತ್ತಮನೆಂದು ತಿಳಿಯದಹಂಕಾರಿಯ ಬಾಯೊಳಗೊಂದು ಕೆರ ದುರುಳನಾಗಿ ಹರಿಶರಣರ ಸೇರದೆ ಮೆರೆವನ ಬಾಯೊಳಗೊಂದು ಕೆರ || ಶ್ರುತಿಶಾಸ್ತ್ರಗಳು ಸುಳ್ಳೆಂತೆಂಬುವ ಶುನಕನ ಬಾಯೊಳಗೊಂದು ಕೆರ ಮತಿಯಿಲ್ಲದೆ ಮದನನಯ್ಯಗೆ ದ್ರೋಹವ ಮಾಳ್ಪನ ಬಾಯೊಳಗೊಂದು ಕೆರ ಗತಿ ನೀನೆ ಹರಿಯೆಂತಿರುವರ ಕಂಡು ಕಾಡುವನ ಬಾಯೊಳಗೊಂದು ಕೆರ ಅತಿಹರುಷದಿ ಹರಿಕಥೆ ಪೇಳ್ವಲ್ಲಿ ಅಡ್ಡಿಪೇಳ್ವನ ಬಾಯೊಳಗೊಂದು ಕೆರ || ನಾನೇ ದೇವರು ಎಂದು ಕುಣಿವ ಬಲುಹೀನನ ಬಾಯೊಳಗೊಂದು ಕೆರ ಮಾನಿತರಾದರ ಹಿಂದು ಮುಂದಾಡುವ ಕೋಣನ ಬಾಯೊಳಗೊಂದು ಕೆರ ನಾನಾ ಪರಿಯಲಿ ನಡತೆಹೀನನಾಗಿ ನಡೆವನ ಬಾಯೊಳಗೊಂದು ಕೆರ ಗಾನಲೋಲ ನಮ್ಮ ಪುರಂದರವಿಠಲನ ನೆನೆಯದ (/ಕಾಣದನ ) ಬಾಯೊಳಗೊಂದು ಕೆರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು