ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ

ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ

(ರಾಗ ಪೂರ್ವಕಲ್ಯಾಣಿ ಆದಿತಾಳ) ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ ||ಪ|| ಇಕ್ಕಿದವರಿಗುಂಟು , ಮದದಲಿ ಸೊಕ್ಕಿದರೇನುಂಟು ರಕ್ಕಸಾಂತಕ ನಮ್ಮ, ಲಕುಮಿಪತಿಯ ಮೊರೆ ಹೊಕ್ಕವರಾದ ಭಜಕರಿಗೆ || ಅರಸನದರು ಸರಿಯೆ , ನಮಗೆ , ತಿರುಕನಾದರು ಸರಿಯೆ ಸರಸವಿರಸದಿಂ ನುಡಿದರೇನು ನರ- ಹರಿಪದಕಮಲವ ನಿರತ ಭಜಕರಿಗೆ || ಪುಟ್ಟಿಸಿದ ದೊರೆಯು , ನಮಗೆ , ಹೊಟ್ಟೆಗೆ ಕೊಡದಿಹನೆ ಬೆಟ್ಟದೊಡೆಯ ನಮ್ಮ , ಪುರಂದರವಿಠಲನ ಗಟ್ಟಿಯಾಗಿ ನಂಬಿದ ದಾಸರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು