ಕಳ್ಳ ಸಿಕ್ಕಿದ ಕಾಣಿರೇ

ಕಳ್ಳ ಸಿಕ್ಕಿದ ಕಾಣಿರೇ

(ರಾಗ ಕಲ್ಯಾಣಿ ಅಟತಾಳ) ಕಳ್ಳ ಸಿಕ್ಕಿದ ಕಾಣಿರೇ , ಎಂದಿನ ಕಡು ಕಳ್ಳ ಸಿಕ್ಕಿದ ಕಾಣಿರೇ || ಕಳ್ಳ ಸಿಕ್ಕಿದ ಕಾಣೆ ಇನ್ನಿವನ ಬಿಡೆಸಲ್ಲ ಎಲ್ಲಿ ನೋಡಲು ಬ್ರಹ್ಮಾದ್ಯರಿಗೆ ಸಿಗದಂಥ ||ಅ|| ಕಡೆದ ಬೆಣ್ಣೆಯ ತೆಗೆದಿಟ್ಟ ಬಳಿಕ ತನ್ನ ಉಡಿಯೊಳರಿಯದಂತೆ ಬೆಕ್ಕು ತಂದು ಕಡೆಗೋಲ ತೆಗೆದು ಬಚ್ಚಿಡೆ ನಾ ಪೋದರೆ ಪಿಡಿದು ತೋರುತ ಬೆಣ್ಣೆಯನಿತ್ತು ಮೆದ್ದಂಥ || ಒಂದು ರಾತ್ರಿಯಲಿ ಮಲಗುತೆಚ್ಚರದಲಿ ಕಂದಗೆ ಮೊಲೆಯೂಡಲು ಬಂದು ಒಂದು ಕೈಯಲಿ ಕೂಸಿನ ಕೈಯ ಪಿಡಿದು ಮ- ತ್ತೊಂದು ಕೈಯಲಿ ಎನ್ನ ಕುಚಗಳ ಪಿಡಿದಂಥ || ಹೆರರ ಮನೆಯೊಳುಂಡು ಹೆರರ ಮನೆಯೊಳಿದ್ದು ಹೆರರ ಭೋಗಿಸುತಿದ್ದ ಗೂಳಿಯಂತೆ ಇರುಳು ಹಗಲು ಎನ್ನದೆ ಮನೆಮನೆಗಳ ತಿರುಗುತಲಿಹ ಪುರಂದರವಿಟ್ಠಲನೆಂಬ ||
ದಾಸ ಸಾಹಿತ್ಯ ಪ್ರಕಾರ
ಬರೆದವರು