ಈ ತನುವ ನಂಬಲು ಬೇಡೊ ಜೀವವೆ

ಈ ತನುವ ನಂಬಲು ಬೇಡೊ ಜೀವವೆ

(ರಾಗ ದರ್ಬಾರು ಅಟತಾಳ) ಈ ತನುವ ನಂಬಲು ಬೇಡೊ ಜೀವವೆ ||ಪ|| ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವುದೊ ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ||ಅ|| ಜರೆಯು ಮರಣದಿಂದ ಭರಿತವಾದುದೀ ಕಾಯ ಸ್ಥಿರವೆಂದು ನಂಬಿ ನೀ ಮರುಳಾಗಬೇಡ || ಧನಧಾನ್ಯ ಪಶುಪತ್ನಿ ಸ್ಥಿರವೆಂದು ತಿಳಿದು ಮನುಮಥನಯ್ಯನ ಮರೆಯದೆ ಮನವೆ || ಶರಣೆಂದವರ ಕಾವ ಗರುಡಕೇತನ ನಮ್ಮ ಪುರಂದರವಿಠಲನ್ನ ಮರೆಯದೆ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು