ಯಾರಮ್ಮ ಮಾತ ಸಾರಮ್ಮ

ಯಾರಮ್ಮ ಮಾತ ಸಾರಮ್ಮ

(ರಾಗ ಮಾಂಜಿ ಅಟತಾಳ) ಯಾರಮ್ಮ ಮಾತ ಸಾರಮ್ಮ ||ಪ|| ದೂರಮಾರ್ಗದಿ ಬಂದು ದುಃಖ ಬಹಳವಮ್ಮ ನೀರನ್ನವಾದರು ಸಾರಾಮೃತವಮ್ಮ ||ಅ|| ಪತಿಗಳ ಕಾಣದೆ ಪಥಪಥ ಹುಡುಕುತ್ತ ಅತಿಶಯದಲಿ ನಿನ್ನ ಹತ್ತಿರ ಬಂದೆವಮ್ಮ || ಬಹಲ ಕಾಲ ವ್ಯಾಳವೇಣಿಯ ಪತಿಗಳ ಬಹಳ ಕದನ ಮಾಡಿ ಲೋಲಾಕ್ಷಿ ಪೊರಟರೆ || ಪುರಂದರವಿಠಲನ ಕರುಣಕೆ ಪಾತ್ರರು ಮರೆತು ಪೋಗದೆ ನಮ್ಮ ಕರುಣಿಸಿ ಪೊರೆಯಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು