ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ
(ರಾಗ ಭೈರವಿ ಛಾಪುತಾಳ)
ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ ||ಪ||
ಬಡವ ನಾನೆಂದು ನಿನ್ನ ಕಾಡುವನಲ್ಲವೊ ||ಅ||
ಒಡಲು ತುಂಬದು ಎಂದು ಬಳಲಿಸಬರಲಿಲ್ಲ
ಸಡಗರದ ಭಾಗ್ಯ ಬೇಡಲಿಲ್ಲ
ಮಡದಿ ಮಕ್ಕಳಿಗಾಗಿ ಕಡುಮೋಹ ಎನಗಿಲ್ಲ
ಬಿಡದೆ ನಿನ್ನಯ ನಾಮಸ್ಮರಣೆಯೊಂದೇ ಸಾಕೊ ||
ಸ್ನಾನ ಮೌನ ಜಪ ತಪಗಳು ಎನಗಿಲ್ಲ
ಮೌನನಾದೆನೋ ನಿನ್ನ ಧ್ಯಾನದಿಂದ
ದೀನರಕ್ಷಕ ನೀನೆ ದಯದಿಂದಲೆನ್ನನು
ಧ್ಯಾನಶುದ್ಧಿಯನಿತ್ತು ಸಲಹಯ್ಯ ಹರಿಯೆ ||
ಬಲೆಗೆ ಸಿಲುಕಿದ ಮೃಗದಂತೆ ಬಾಯಿ ಬಿಡುತ
ಅಲಸಿ ಕೋಟಲೆ ಸಂಸಾರದಿಂದ
ತಲೆಹುಳುತ ನಾಯಂತೆ ಬಯಲಾಸೆಗೆ ಸಿಲುಕಿದೆ
ಸಲಹೊ ದೇವರ ದೇವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments