ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ

ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ

(ರಾಗ ರೇಗುಪ್ತಿ ಝಂಪೆತಾಳ) ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ ಹೇಳಲಂಜುವೆನು ನಿನ್ನ ಬಾಳಬಳಗಗಳೆಲ್ಲ ಪಾಲಿಸು ಅಭೀಷ್ಟವನು ವ್ಯಾಳಗಿರಿ ವೆಂಕಟೇಶ ಈಶ ||ಪ|| ತಲೆಹೊಡಕ ಹಿರಿಯ ಮಗ ಧರೆಗೆ ಪೂಜಿತನಲ್ಲ ಬಲು ಭಂಡ ಕಿರಿಯ ಮಗನು ಲಲನೆ ಲೋಭಿಗಳ ಮನೆ ನಿಲಿಸಿಹಳು ಸೊಸೆ ತಾನು ಹೊಲೆಯಕುಲವರಿಯದವಳು || ಮಗಳ ಮಾರ್ಗವು ಡೊಂಕು, ಮೈದುನ ಗುರುದ್ರೋಹಿ ಮೊ- ಮ್ಮಗನು ಬಲು ಚಾಡಿಖೋರ ಹಗರಣೆಗ ನೀಯೆಂಜಲ್ಹಣ್ಣನು ಮೆದ್ದು ಮೂ- ಜಗದೊಡೆಯನೆನಿಸಿ ಮೆರೆದೆ ತಿರಿದೆ || ಹಲವಂಗದವನೆಂದು ಆಡಲೇತಕೆ ಕುಡುತೆ ಪಾಲ ಸವಿದುಂಡ ರನ್ನ ನೆಲೆಗೆ ಸಿಲುಕದ ನೀನು ಪುರಂದರವಿಠಲನೆ ಸಲಹಿದಾಸನ ಮಾಡಿದೆ ಬಿಡದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು