ಕೆಟ್ಟು ನೆಂಟರ ಸೇರೋದು ಬಹಳ ಕಠಿಣ

ಕೆಟ್ಟು ನೆಂಟರ ಸೇರೋದು ಬಹಳ ಕಠಿಣ

(ರಾಗ ಕಾಂಭೋಜ ಛಾಪುತಾಳ) ಕೆಟ್ಟು ನೆಂಟರ ಸೇರೋದು ಬಹಳ ಕಠಿಣ ||ಪ|| ಇನ್ನು , ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ||ಅ|| ವಿಷವ ಕುಡಿಯಲುಬಹುದು, ಎಸೆದ ಶೂಲದ ಮುಂದೆ ಒಸಗಿ ಬಹುವೇಗದಿಂ ಹಾಯಬಹುದು ವಿಷದ ಕುಂಡದ ಒಳಗೆ ಮುಳುಗಿಕೊಂಡಿರಬಹುದು ಎಸೆವ ಅಂಬಿಗೆ ಎದೆಯ ಗುರಿಮಾಡಬಹುದು || ಶರಧಿ ಧುಮುಕಲುಬಹುದು , ಉರಗನಪ್ಪಲುಬಹುದು ಧರೆ ತುಂಬ ಗ್ರಾಸಕೊಡಬಹುದು ಮರದ ಕೊಂಬಿನ ಮೃಗಕೆ ಇರಿಯಲು ಕೊಡಬಹುದು ಗರಗಸದಲಿ ಕೊರಳ ಕೊಯಿಸಿಕೊಳಬಹುದು || ಕುಡುಗೋಲ ಪಿಡಿದು ಕೊರಳನು ಕೊಯ್ದುಕೊಳಬಹುದು ಒಡಲಿಗಾಗಿ ಹುಡಿಯ ಮುಕ್ಕಬಹುದು ಪೊಡವಿಯೊಳು ಪುರಂದರವಿಠಲರಾಯನ ಕಡುಹರುಷದಿ ಭಜಿಸಿ ಸುಖಿಯಾಗಬಹುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು