ಏಳೆಲೋ ರಂಗೇಶ

ಏಳೆಲೋ ರಂಗೇಶ

(ರಾಗ ಪುನ್ನಾಗವರಾಳಿ ರೂಪಕತಾಳ) ಏಳೆಲೋ ರಂಗೇಶ , ಏಳೆಲೋ ಜಗದೀಶ ||ಪ|| ಸಂಸಾರಾಂಭುಧಿಯಲ್ಲಿ , ಶರೀರವೆಂಬೋ ಪಾಡೆಯಲ್ಲಿ ||ಅ|| ಕಂಸಾರಿ ವ್ಯವಹಾರಿ , ಕಡುಲೋಭಿ ಜೀವಶೆಟ್ಟಿ ಕಾಲವೆಂಬೊ ಕಳ್ಳಪಾಡೆ , ಕಲಹಂಸಾವುಂಡಿರುವ ಕ್ರೂರನೆಂಬೊ ಕಳ್ಳ ಬಂಟ, ಕಿಡಿಗೇಡಿ ನೋಡುತಿಹ ಬಾರಯ್ಯ ಈಗ , ತೋರಯ್ಯ ಈಗ ಭಾರ ಬಿದ್ದಾಗ , ಶರಣಾದೆನೀಗ ಹಿಂದೆ ಮುಂದೆ ನಿಂತು ಕಾಯೊ , ಇಂದು ಬಾರೆಂದು ತಂದೆಯಂತೆ, ಕಂದನೆ ಏಳೆಲೊ || ಕಾಮನೆಂಬೊ ಕೂರ್ಮಗಳು , ಕ್ರೋಧವೆಂಬೊ ಮಡುಗಳು ಲೋಭವೆಂಬೊ ಮೊಸಳೆಗಳು , ಮೋಹವೆಂಬೊ ಮತ್ಸ್ಯಗಳು ಮದವೆಂಬೊ ಮದ್ದಾನೆಗಳು , ಮತ್ಸರವೆಂಬೊ ಕುದುರೆಗಳು ಬಾರಯ್ಯ ಈಗ , ತೋರಯ್ಯ ಈಗ ಭಾರ ಬಿದ್ದಾಗ , ಶರಣಾದೆನೀಗ ಹಿಂದೆ ಮುಂದೆ ನಿಂತು ಕಾಯೊ , ಇಂದು ಬಾರೆಂದು ತಂದೆಯಂತೆ, ಕಂದನೆ ಏಳೆಲೊ || ಮೃತ್ಯುಲೋಕ ಪಟ್ಟಣದೊಳು, ಮನೆಬಾಗಿಲನೆ ಮಾಡಿ ಹೀಗಿದೆಯೆಂದು ತಿಳಿದುಕೊಂಡು , ಭವಗಡಲ ಕಡೆಗಾಣದೆ ಕೊಡಹಿನಲ್ಲಿ ಕಡೆ ತೋರಿಸೊ ಎನ್ನನು , ಕರುಣಿ ಪುರಂದರವಿಠಲ ಬಾರಯ್ಯ ಈಗ , ತೋರಯ್ಯ ಈಗ ಭಾರ ಬಿದ್ದಾಗ , ಶರಣಾದೆನೀಗ ಹಿಂದೆ ಮುಂದೆ ನಿಂತು ಕಾಯೊ , ಇಂದು ಬಾರೆಂದು ತಂದೆಯಂತೆ, ಕಂದನೆ ಏಳೆಲೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು