ಕಣ್ಣೆತ್ತಿ ನೋಡಲು ಬೇಡ, ಅವಳ

ಕಣ್ಣೆತ್ತಿ ನೋಡಲು ಬೇಡ, ಅವಳ

(ರಾಗ ದರ್ಬಾರಿ ಆದಿತಾಳ) ಕಣ್ಣೆತ್ತಿ ನೋಡಲು ಬೇಡ ||ಪ|| ಅವಳ , ಸಣ್ಣ ಬೈತಲೆ ನೋಡಿ ಮರುಳಾಗಬೇಡ ||ಅ|| ಕಣ್ಣಿಟ್ಟು ಕೀಚಕ ಕೆಟ್ಟ , ಪರ- ಹೆಣ್ಣಿಗಾಗಿ ರಾವಣ ತಲೆಕೊಟ್ಟ ಇನ್ನೆಷ್ಟು ಹೇಳಲಾ ನಷ್ಟ ಹೆಣ್ಣ ಮೋಹಿಸಿದರೆ ಬರುವೋದು ಕಷ್ಟ || ದೂಷಿಸದಿರು ದುರುಳ ಕಣ್ಣ , ಅವಳ ಥೋರ ಕಕ್ಕಸಕುಚ ನಡು ಬಹುಸಣ್ಣ ಸೀರೆಯ ಬಿಗಿದುಟ್ಟ ಹೆಣ್ಣ , ಅವಳ ಓರೆನೋಟ ನೋಡಿ ಹಾರಬೇಡಣ್ಣ || ಹಸಿವು ಇಲ್ಲದ ಸವಿಯೂಟ , ತನ್ನ ವಶಕ್ಕೆ ಬಾರದ ಪರಸ್ತ್ರೀಯರ ಕೂಟ ದೇಶದೊಳಪಕೀರ್ತಿ ಮಾಟ , ವಸು- ಧೇಶ ಪುರಂದರವಿಠಲಗಲ್ಲದ ನೋಟ ||
ದಾಸ ಸಾಹಿತ್ಯ ಪ್ರಕಾರ
ಬರೆದವರು