ಕಣ್ಣ ಮುಂದಿರೋ ರಂಗ

ಕಣ್ಣ ಮುಂದಿರೋ ರಂಗ

(ರಾಗ ಶಂಕರಾಭರಣ ಆದಿತಾಳ) ಕಣ್ಣ ಮುಂದಿರೋ, ರಂಗ, ಕಣ್ಣ ಮುಂದಿರೋ ||ಪ|| ಪೂತನಿಯ ಮೊಲೆಯನುಂಡು ವಾತಶಕಟಾದಿ ದೈತ್ಯರ ಘಾತಿಸಿದ ರಂಗ ನಿನ್ನ ಪೋಕತನಕಂಜುವೆನು || ಕಡಹದ ಮರವನೇರಿ ಮಡುವ ಧುಮುಕಿ ಕಾಳಿಂಗನ ಪೆಡೆಯ ತುಳಿದು ಅವನ ಸ್ಥಳವ ಬಿಡಿಸಿ ಬಂದೆ ಕರುಣನಿಧಿಯೆ || ಬಾಲೆಯರ ಮನೆಗೆ ಪೋಗಿ ಹಾಲು ಮೊಸರು ಕದ್ದು ಇಂಥ ಲೀಲೆ ಮಾಡದಿರು ನಮ್ಮ ಲೋಲ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು