ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ

ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ

(ರಾಗ ಯಮುನಾ ತ್ರಿಪುಟತಾಳ ) ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ ||ಪ|| ಅಟ್ಟಾದಡಿಗೆ ಬಿಟ್ಟು ಆಚೆಮನೆಯ ಬಿಟ್ಟು ಮೃಷ್ಟಾನ್ನವ ನೀ ಬಯಸಿದರಿಲ್ಲ ||ಅ|| ಹೆಣ್ಣಿನ ದೆಸೆಯಿಂದ ಬರುವದು ಇಲ್ಲ ಅನ್ಯ ದೇವತೆಗಳ ಪೂಜಿಸಿದರು ಇಲ್ಲ ಅನ್ಯರ ಕಾಡಿ ಬೇಡಿದರು ಇಲ್ಲ ತನ್ನ ಪುಣ್ಯಫಲವು ತನಗೆ ಇಲ್ಲದಿಲ್ಲ || ಊಳಿಗವನು ನೀ ಮಾಡಿದರು ಇಲ್ಲ ಊರನಾಳುವುದಕೆ ಸೇರಿದರು ಇಲ್ಲ ಹೇರಳ ವಿದ್ಯಾ ಕಲಿತರು ಇಲ್ಲ ನೀರೊಳಗಿ ಮುಳುಗಿ ಜಪವ ಮಾಡಿದರಿಲ್ಲ || ಬಟ್ಟಲು ಪಿಡಿದು ಬಾಯಿ ಬಿಟ್ಟು ಕೇಳಿದರಿಲ್ಲ ಅಟ್ಟಾದಡವಿಯೊಳು ಕುಳಿತರು ಇಲ್ಲ ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ ಕೊಟ್ಟವರಿಗುಂಟು ಕೊಡದವರಿಗಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು