ಯಮನೆಲ್ಲ್ಯೂ ಕಾಣೆನೆಂದು.
( ರಾಗ ಮುಖಾರಿ / ಶಿವರಂಜನಿ. ಝಂಪೆ ತಾಳ)
ಯಮನೆಲ್ಲ್ಯೂ ಕಾಣೆನೆಂದು ಹೇಳಬೇಡ ||ಪ||
ಯಮನೇ ರಾಮಚಂದ್ರ ಸಂದೇಹ ಬೇಡ ||ಅ||
ನಂಬಿದ ವಿಭೀಷಣಗೆ ರಾಮನಾದ
ನಂಬದಿದ್ದ ರಾವಣನಿಗೆ ಯಮನೆ ಆದ ||
ನಂಬಿದ ಅರ್ಜುನನಿಗೆ ಬಂಟನಾದ
ನಂಬದಿದ್ದ ಕೌರವನಿಗೆ ಕಂಟಕನಾದ ||
ನಂಬಿದ ಉಗ್ರಸೇನನಿಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ ||
ನಂಬಿದ ಬಾಲಕನಿಗೆ ಹರಿಯಾದ
ನಂಬದಿದ್ದ ಅವನ ಪಿತಗೆ ಅರಿಯಾದ ||
ನಂಬಿದವರ ಸಲಹುವ ನಮ್ಮ ದೊರೆಯು
ಅಂಬುಜಾಕ್ಷ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments