ರಂಗ ಬಾರೋ ಪಾಂಡುರಂಗ
( ರಾಗ ಶಂಕರಾಭರಣ. ಆದಿ ತಾಳ)
ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ ||
ರಂಗ ಬಾರೋ ನರಸಿಂಗ ಬಾರೋ ||ಅ ||
ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾರಮಣ ಮುಕುಂದ ಬಾರೋ ||
ಅಪ್ಪಬಾರೋ ತಿಮ್ಮಪ್ಪ ಬಾರೋ ,ಕಂ-
ದರ್ಪನಯ್ಯನೆ ಕಂಚಿವರದ ಬಾರೋ ||
ಅಣ್ಣ ಬಾರೋ ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿ ಚೆನ್ನ ಬಾರೋ ||
ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ ಎ-
ನ್ನಿಷ್ಟಮೂರ್ತಿ ಪುರಂದರವಿಠಲ ಬಾರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments