ರಂಗ ಬಾರೋ ಕೃಷ್ಣ ಬಾರೋ
( ರಾಗ ಮೋಹನ. ಏಕ ತಾಳ)
ರಂಗ ಬಾರೋ ಕೃಷ್ಣ ಬಾರೋ ||ಪ ||
ಮಂಗಳಾತ್ಮಕ ಮನಸಿಜಯ್ಯನೆ
ಅಂಗಜಜನಕ ಕಾಳಿಂಗಮರ್ದನ ಬಾರೋ ||ಅ ||
ಪುಂಡರೀಕಾಕ್ಷ ಶ್ರೀ ರಾಮಚಂದ್ರ ಬಾರೋ, ಕೋ-
ದಂಡವನೆ ಪಿಡಿದ ಮುಕುಂದ ಬಾರೋ
ಪಾಂಡುಸುತರ ಕಾಯಿದ ಪರಬ್ರಹ್ಮ ಬಾರೋ , ಉ-
ದ್ದಂಡ ರೂಪ ತಾಳಿದ ನರಸಿಂಹನೆ ಬಾರೋ ||
ಮಾವ ಕಂಸನ ಕೊಂದ ಮಹಿಮನೆ ಬಾರೋ
ಮಚ್ಛ ಕೂರ್ಮ ವರಹ ವಾಸುದೇವ ಬಾರೋ
ನಿಶ್ಚಿಂತ ವಾಮನತ್ರಿವಿಕ್ರಮ ಬಾರೋ
ಸ್ವಚ್ಛಮೂರ್ತಿ ದಿವ್ಯ ರೂಪದ ವಸ್ತು ಬಾರೋ ||
ಕೊಡಲಿಯನು ಪಿಡಿದ ಕಡುಶೂರ ಬಾರೋ
ತೇಜಿಯನೇರಿದ ಎನ್ನೊಡೆಯ ಬಾರೋ
ಜಗದೊಡೆಯ ಪುರಂದರವಿಠಲರಾಯ
ವೆಂಕಟರಮಣನೆ ನೀನೀಗ ಬಾರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments